28 ಕಾಮಕಟಂಕಟಾ ರಾಕ್ಷಸಿಯ ಕಥೆ Kamakatankatakata Rakshasi


ಪ್ರಾಗ್ಜ್ಯೋತಿಷ ಎಂಬ ನಗರದ ರಾಜನಾಗಿದ್ದ ನರಕಾಸುರನಿಗೆ ಮುರ ಎಂಬ ಸೇನಾಧಿಪತಿ ಇದ್ದ. ಆತನ ಮಗಳು ಕಾಮಕಟಂಕಟೆ. ಈಕೆ ಕಾಮಾಖ್ಯ ಎಂಬ ದೇವತೆಯ ಉಪಾಸನೆಯನ್ನು ಮಾಡಿದಳು. ಇದರಿಂದ  ಮಹಾಬಲಶಾಲಿಯಾದಳು ಹಾಗೂ  ಸಾಹಸ ಸೌಂದರ್ಯ ಸದ್ಗುಣಗಳಿಂದ ಕೂಡಿದ್ದಳು. ಶ್ರೀಕೃಷ್ಣ ನರಕಾಸುರನೊಂದಿಗೆ ಯುದ್ಧ ಮಾಡಿ ಸಂಹರಿಸುವಾಗ ಈಕೆಯ ತಂದೆಯಾದ ಮುರನನ್ನು ಸಂಹರಿಸಿದ. ಆನಂತರ ಈಕೆ ತಂದೆಯನ್ನು ಸಂಹರಿಸಿದ ಶ್ರೀಕೃಷ್ಣನೊಂದಿಗೆ ಮೂರು ದಿನಗಳವರೆಗೆ ಹೋರಾಡಿದಳು. ಆನಂತರ ಆರಾಧ್ಯದೇವರು ತಡೆದಾಗ ಯುದ್ಧದಿಂದ ವಿಮುಖರಾದಳು ತಂದೆಯ ಮರಣದ ನಂತರ ನರಕಾಸುರನ ಪುತ್ರನಾದ ಭಗದತ್ತನ ಆಶ್ರಯದಲ್ಲಿದ್ದಳು ಸೌಂದರ್ಯವತಿಯಾದ ಈಕೆ ತಾನು ಕೊಟ್ಟ ಒಗಟುಗಳನ್ನು ಬಿಡಿಸಿ ತನ್ನನ್ನು ಯುದ್ಧದಲ್ಲಿ ಗೆದ್ದವನನ್ನು ಮದುವೆಯಾಗುವುದಾಗಿ ಪ್ರತಿಜ್ಞೆ ಮಾಡಿದ್ದಳು. ಹಾಗೆಯೇ ಸೋತಂತಹ ಲಕ್ಷಗಟ್ಟಲೆ ವೀರರನ್ನು ಈಕೆ ಹೊಂದಿದ್ದಳು ಭೀಮನ ಮಗನಾದ ಘಟೋತ್ಕಚ ಶ್ರೀಕೃಷ್ಣನ ಆಣತಿಯಂತೆ ಈಕೆಯ ಬಳಿಬಂದು ಯುದ್ಧಮಾಡಿದ ಹಾಗೂ ಶ್ರೀಕೃಷ್ಣನ ಅನುಗ್ರಹದಿಂದ ಈಕೆಯನ್ನು ಗೆದ್ದು ಮದುವೆಯಾದ. ಇವರ ವಿವಾಹ ಇಂದ್ರಪ್ರಸ್ಥದಲ್ಲಿ ಮಹಾ ವೈಭವದಿಂದ ಪಾಂಡವರ ಸಮ್ಮುಖದಲ್ಲಿ ನೆರವೇರಿತು. ನಂತರ ಕೆಲಕಾಲ ಇಂದ್ರಪ್ರಸ್ಥದಲ್ಲಿ ಇದ್ದು ನಂತರ ತನ್ನ ಪತಿಯೊಂದಿಗೆ ಹಿಡಿಂಬನ ರಾಜ್ಯವನ್ನು ಸೇರಿ ಅಲ್ಲಿ ಘಟೋತ್ಕಚನಂತೆಯೇ ಅದ್ಭುತ ಪರಾಕ್ರಮ ಹಾಗೂ ಶಕ್ತಿ ಸಂಪನ್ನನಾದ ಬರ್ಬರೀಕ ಎಂಬ ಕುಮಾರನನ್ನು ಪಡೆದಳು. 

ಕಾಮೆಂಟ್‌ಗಳು