2 ಅಲರ್ಕ ರಾಜನ ಕಥೆ Alarka Rajana kathe

 ಅಲರ್ಕ ರಾಜನ ಕಥೆ


ಅಲರ್ಕ ಎನ್ನುವ ಹೆಸರಿನ ರಾಜನೊಬ್ಬ ಹಿಂದೆ ಇದ್ದನಂತೆ. ಆತ ತನ್ನ ಬಾಹುಬಲದಿಂದ, ಧನುಸ್ಸಿನ ಬಲದಿಂದ ಸಮಸ್ತ ಭೂಮಿಯನ್ನು ಜಯಿಸಿದನಂತೆ ಶತ್ರು ನಿಗ್ರಹವನ್ನು ಮಾಡಿ ಯಶಸ್ಸು ಸಾಧಿಸಿದ ರಾಜನಿಗೆ ನಂತರದ ದಿನಗಳಲ್ಲಿ ಜೀವನದ ನಿಜವಾದ ಉದ್ದೇಶವೇನು ಎಂಬ ಪ್ರಶ್ನೆ ಕಾಡಿತ್ತು. ಇಂದ್ರಿಯಗಳ ಜಯ ಹಾಗೂ ಮನೋನಿಗ್ರಹವೇ ನಿಜವಾದ ಜಯ ಹಾಗೂ ಮೋಕ್ಷವೇ ಜೀವನದ ಪರಮ ಲಕ್ಷ್ಯ ಎಂಬುದನ್ನು ಆತ ಅರಿತುಕೊಂಡ. ಆತ್ಮಜ್ಞಾನದ ಆನಂದದ ಎದುರು ರಾಜ್ಯ ಕೋಶ ಗಳೆಲ್ಲವೂ ಕ್ಷಣಿಕವಾಗಿ ತೋರಿದವು. ಆನಂತರ ಮಹಾ ತಪಸ್ಸು ಮಾಡಿ ಬ್ರಹ್ಮಜ್ಞಾನಿಯಾದ ಹಾಗೂ ತನ್ನ ಗುರಿಯನ್ನು ಪಡೆದ ಎಂದು ಹೇಳುತ್ತಾರೆ. ನಾವೆಲ್ಲರೂ ನಮ್ಮ ಜೀವನದ ಲಕ್ಷ್ಯವನ್ನು ನಿರ್ಧರಿಸಿದರೆ ಮುಂದಿನ ಹಾದಿ ಸುಗಮವಾಗುತ್ತದೆ.


ಕಾಮೆಂಟ್‌ಗಳು