https://youtu.be/WORenbqWSpY
ಅಹಂಕಾರದ ಪರಿಣಾಮ (ಅಜಗರ ವೃತ್ತಾಂತ)
ಹಿಂದೆ ಸುದರ್ಶನ ಎಂಬೊಬ್ಬ ವಿದ್ಯಾಧರ ಅತಿ ಸುಂದರ ಶರೀರವನ್ನು ಹೊಂದಿದ್ದ. ತನ್ನ ಸೌಂದರ್ಯದಿಂದ ಅಹಂಕಾರಿಯಾದ ಆತ ಅಂಗಿರಸ ಎಂಬ ತಪಸ್ವಿಗಳನ್ನು ಹಾಸ್ಯ ಮಾಡಿದ. ಅವರ ದೇಹವನ್ನು ಕುರಿತು ಮಾಡಿದ ಅಪಹಾಸ್ಯ ವಿಕೋಪಕ್ಕೆ ತಿರುಗಿತು. ತಪಸ್ವಿಗಳು ಕ್ರುದ್ಧರಾಗಿ ಸುದರ್ಶನ ನನ್ನು ನೀನು ಅಜಗರನಾಗು ಎಂದು ಶಪಿಸಿದರು. ಅಜಗರ ಎಂದರೆ ಹೆಬ್ಬಾವು ಎಂದರ್ಥ. ಶಾಪವನ್ನು ಹೊಂದಿದ ಸುದರ್ಶನ ದುಃಖಿತನಾಗಿ ಅವರನ್ನು ಬೇಡಿಕೊಂಡ. ಕನಿಕರಗೊಂಡ ಮಹರ್ಷಿಗಳು ಶ್ರೀಕೃಷ್ಣನ ಅವತಾರವಾದಾಗ ಅವನಿಂದ ಶಾಪವಿಮೋಚನೆ ಯಾಗುವುದು ಎಂದು ಶಾಪವಿಮೋಚನೆಯ ಮಾರ್ಗವನ್ನು ತಿಳಿಸಿದರು. ಹೀಗೆ ಶಾಪ ಪ್ರಭಾವದಿಂದ ಅಜಗರ ನಾದ ಸುದರ್ಶನ ದೀರ್ಘಕಾಲ ಸರ್ಪ ಶರೀರದಿಂದಲೇ ಕಾಲ ಕಳೆಯಬೇಕಾಯಿತು.
ಯಾತ್ರಾರ್ಥಿಯಾಗಿ ಹೊರಟ ಗೋಕುಲದ ಒಡೆಯ ನಂದನನ್ನು ಈ ಅಜಗರ ಹಿಡಿಯಲು ಶ್ರೀಕೃಷ್ಣನು ಅದನ್ನು ತನ್ನ ಪಾದಗಳಿಂದ ತುಳಿದು ಶಾಪವಿಮೋಚನೆ ಮಾಡಿದ್ದಲ್ಲದೇ, ತನ್ನ ಸಾಕು ತಂದೆಯಾದ ನಂದನನ್ನು ಬಿಡಿಸಿದ. ಹೀಗೆ ಪರರನ್ನು ನಿಂದಿಸಿದ ಪರಿಣಾಮವಾಗಿ ಸುದರ್ಶನ ಅಜಗರ ನಾಗಿಕಾಲ ಕಳೆಯಬೇಕಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ