16 ಏಕಾವಲಿಯ ಕಥೆ Ekavaliya Kathe Kathe


ಏಕಾವಲಿ ರೈಭ್ಯರಾಜನ ಮಗಳು. ಈಕೆ ಮದುವೆಯ ವಯಸ್ಸಿಗೆ ಬರಲು ಈಕೆಯ ತಂದೆಯು ಈಕೆಯನ್ನು ಹರಿವರ್ಮ ಎಂಬ ವಿಷ್ಣು ಭಕ್ತನಾದ ರಾಜನ ಮಗ ಹೈಹಯನಿಗೆ ಮದುವೆಯನ್ನು ಮಾಡಿಕೊಡಲು ನಿಶ್ಚಯಿಸಿದ. ಹೈಹಯನಿಗೆ ಏಕವೀರ ಎಂಬ ಹೆಸರೂ ಇದೆ. ಚಂದ್ರವಂಶದ ಹರಿವರ್ಮ ರಾಜನಿಗೆ ಹಯಗ್ರೀವ ರೂಪಧಾರಿ ಆಗಿದ್ದ ವಿಷ್ಣುವಿನ ವರದಿಂದ ಈತ ಹುಟ್ಟಿದ್ದರಿಂದ ಇವನಿಗೆ ಹೈಹಯ ಎಂಬ ಹೆಸರು ಬಂತು. ಈತನಿಗೆ ನಿಶ್ಚಯಿಸಿರುವ ಏಕಾವಲಿ ತನ್ನ ಸಖಿಯರ ಜೊತೆ ವಿಹರಿಸುತ್ತಿರುವಾಗ ಕಾಲಕೇತು ಎಂಬ ರಾಕ್ಷಸ ಅವರನ್ನು ಅಪಹರಿಸಿ, ಪಾತಾಳಲೋಕಕ್ಕೆ ಕೊಂಡೊಯ್ದು ಅಲ್ಲಿ ರಿಸಿದ. ಆಗ ಏಕಾವಲಿ ಧೈರ್ಯಗೆಡದೇ ತನ್ನ ಸಖಿಯಾದ ಯಶೋಮತಿಯ ಮೂಲಕ ಹೈಹಯನನ್ನು ಕರೆಯಿಸಿದಳು. ಹೈಹಯನು ಕಾಲಕೇತುವನ್ನು ಕೊಂದು ಏಕಾವಲಿಯನ್ನು ಮದುವೆಯಾದ. ಹೀಗೆ ಏಕಾವಲಿ ಆಪತ್ತು ಬಂದಾಗ ಧೈರ್ಯಗೆಡದೇ  ಅದನ್ನು ಎದುರಿಸಿ ಉಪಾಯದಿಂದ ಕಾರ್ಯಸಾಧನೆಯನ್ನು ಮಾಡಿದ್ದು ನಮಗೆಲ್ಲ ಆದರ್ಶಪ್ರಾಯವಾಗಿದೆ.

ಕಾಮೆಂಟ್‌ಗಳು