8 ಇಂದೀವರಾಕ್ಷನ ಕಥೆ - Indeevarakshana Kathe



ಇಂದೀವರಾಕ್ಷನ ಕಥೆ
ನಲನಾಭ ಎಂಬ ಗಂಧರ್ವನ ಮಗ ಇಂದೀವರಾಕ್ಷ.  ಈತ ಸಂಚರಿಸುತ್ತಾ ಒಮ್ಮೆ ಬ್ರಹ್ಮಮಿತ್ರ ಎಂಬ ಮುನಿಯ ಆಶ್ರಮದ ಸಮೀಪ ತಲುಪಿದ. ಮುನಿಗಳು ಶಿಷ್ಯರಿಗೆ ಆಯುರ್ವೇದದ ಪಾಠವನ್ನು ಮಾಡುತ್ತಿದ್ದರು. ಈತ ಅಲ್ಲಿಯೇ ಮರೆಯಾಗಿದ್ದು ಆಯುರ್ವೇದವನ್ನು ಗ್ರಹಿಸಿದ. ಆನಂತರ ಬ್ರಹ್ಮಮಿತ್ರ  ಮುನಿಗಳನ್ನು ಪರಿಹಾಸ ಮಾಡಿದ. ಬ್ರಹ್ಮಮಿತ್ರರು ಕ್ರುದ್ಧರಾರು ಹಾಗೂ ಬ್ರಹ್ಮರಾಕ್ಷಸ ನಾಗು ಎಂದು ಶಪಿಸಿದರು. ಮುನಿಗಳ ಶಾಪ ಪ್ರಭಾವದಿಂದ ಬ್ರಹ್ಮ ರಾಕ್ಷಸನಾದ ಈತ ತನ್ನ ಮಗಳನ್ನೇ ತಿನ್ನಲು ಉಪಕ್ರಮಿಸಿದ. ಈತನ ಮಗಳ ಹೆಸರು ಮನೋರಮೆ. ಆಕೆಯ ಪತಿ ಸ್ವರೋಚಿ ಎಂಬ ಗಂಧರ್ವ. ತನ್ನ ಪತ್ನಿಯನ್ನು ಭಕ್ಷಿಸಲು ಹೊರಟ ಬ್ರಹ್ಮರಾಕ್ಷಸನನ್ನು ನಿವಾರಿಸಲು ಸ್ವರೋಚಿ ಆಗ್ನೇಯಾಸ್ತ್ರವನ್ನು ಪ್ರಯೋಗಿಸಿದ. ಇದರಿಂದ ಇನ್ದೀವರಾಕ್ಷನ ಶಾಪವಿಮೋಚನೆಯಾಯಿತು ಹೀಗೆ ಇನ್ದೀವರಾಕ್ಷ ಪರರನ್ನು ಪರಿಹಾಸ ಮಾಡಿದ್ದರಿಂದ ಬ್ರಹ್ಮರಾಕ್ಷಸ ನಾಗಿ ಕಾಲ ಕಳೆಯಬೇಕಾಯಿತು.

ಕಾಮೆಂಟ್‌ಗಳು