ಇಕ್ಷ್ವಾಕುವೆಂಬ ಬ್ರಾಹ್ಮಣ ಸಕಲ ವೇದ-ವೇದಾಂಗ ನೀತಿಶಾಸ್ತ್ರ ನಿಪುಣನಾಗಿದ್ದ. ಆದರೆ ಒಬ್ಬರಿಗೂ ಒಂದಕ್ಷರವನ್ನು ಹೇಳಿಕೊಡದೇ ಸ್ವಾರ್ಥಿಯಾಗಿ ಸುಖವನ್ನು ಅನುಭವಿಸುತ್ತಾ ಕಾಲಕಳೆಯುತ್ತಿದ್ದ. ಹೀಗಿರಲು ಈತ ಆಕಸ್ಮಾತ್ ಮರಣವನ್ನು ಹೊಂದಿದ. ಯಮಲೋಕಕ್ಕೆ ತೆರಳಿದ ಈತನನ್ನು ಯಮ ವಿಚಾರಿಸಿ ನೀನು ಮಹಾಪಾಪಿ, ಸ್ವಲ್ಪ ಮಾತ್ರವೂ ಪುಣ್ಯವನ್ನು ಮಾಡಿಲ್ಲ ಆದ್ದರಿಂದ ಈ ಲೋಕದಲ್ಲಿ ಕೋಟಿ ವರ್ಷಗಳ ಕಾಲ ಅನುಭವಿಸಿದರೂ ನಿನ್ನ ಪಾಪದ ಫಲ ಮುಗಿಯುವುದಿಲ್ಲ; ಆದರೆ ನಿನ್ನ ಆಯುಷ್ಯದಲ್ಲಿ ಸ್ವಲ್ಪಕಾಲ ಮಿಕ್ಕಿದೆ. ನಿನ್ನ ಹಿಂದಿನ ದೇಹವನ್ನೇ ಸೇರಿ ಸ್ವಲ್ಪವಾದರೂ ಭಗವಂತನನ್ನು ಆರಾಧಿಸು, ಎಂದು ಹಿಂದುರುಗಿ ಕಳುಹಿಸಿದ. ಪುನರ್ಜೀವನ ಪಡೆದ ಇಕ್ಷ್ವಾಕು ಭಯದಿಂದ ಕೂಡಿದವನಾಗಿ ಜಾಬಾಲಿ ಮುನಿಗಳನ್ನು ಆಶ್ರಯಿಸಿ ಹತ್ತು ದಿನಗಳು ಮಾತ್ರವೇ ಆಯಸ್ಸು ಉಳಿದಿದೆ ಎಂದು ತಿಳಿದು, ಮನಃಪೂರ್ವಕವಾಗಿ ಭಗವಂತನನ್ನು ಆರಾಧಿಸುತ್ತಾ, ಸದ್ವಿಚಾರಗಳಲ್ಲಿ ತೊಡಗಿದ. ನಂತರ ದೇಹ ತ್ಯಾಗ ಮಾಡಿ ಅಲ್ಪಕಾಲದಲ್ಲಿ ಮಾಡಿದ ಭಕ್ತಿಯುಕ್ತ ಆರಾಧನೆಯಿಂದ ದೇವರ ಅನುಗ್ರಹಕ್ಕೆ ಪಾತ್ರನಾಗಿ ಶಿವಲೋಕವನ್ನು ಸೇರಿದ ಎನ್ನುತ್ತಾರೆ. ನಾವೆಲ್ಲರೂ ಅಂತ್ಯಕಾಲಕ್ಕಾಗಿ ಕಾಯದೇ ನಿರಂತರ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಪಾಪ ರಹಿತರಾಗಿ ಭಗವಂತನ ಆರಾಧನೆಯನ್ನು ಮಾಡೋಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ