10 ಇಂದ್ರವಾಹ ಮಹಾರಾಜನ ಕಥೆ Indravaha Maharaja.


ಸೂರ್ಯವಂಶದ ಇಕ್ಷ್ವಾಕು ರಾಜನ ಮಗ ಶಶಾದ. ಈತನ ಮಗ ಪುರಂಜಯ. ಈ ಪುರಂಜಯನಿಗೆ ಇಂದ್ರ ವಾಹ ಹಾಗೂ ಕಕುತ್ಸ್ಥ ಎಂಬ ಬೇರೆ ಬೇರೆ ಹೆಸರುಗಳಿವೆ. ಒಮ್ಮೆ ದೇವತೆಗಳು ರಾಕ್ಷಸರೊಡನೆ ಹೋರಾಡುತ್ತಿದ್ದಾಗ ಸೋಲುವ ಹಂತವನ್ನು ತಲುಪಿದರು. ಆಗ ಇಂದ್ರನು ಶೂರ ರಾಜನಾದ ಪುರಂಜಯನನ್ನು ಸಹಾಯಕ್ಕಾಗಿ ಯಾಚಿಸಿದ. ಈತ ಇಂದ್ರನೇ ತನಗೆ ವಾಹನ ವಾಗುವುದರೆ ತಾನು ಸಹಾಯ ಮಾಡುವೆನೆಂದ. ಇಂದ್ರನು ಇದಕ್ಕೆ ಒಪ್ಪಿ ಎತ್ತಿನ ರೂಪದಿಂದ ಇವನ ವಾಹನನಾದ. ನಂತರ ಪುರಂಜಯ ಎತ್ತಿನ ಹಿಣಿಲ ಮೇಲೆ ಕುಳಿತು ಯುದ್ಧವನ್ನು ಮಾಡಿ ರಾಕ್ಷಸರನ್ನು ಯುದ್ಧದಲ್ಲಿ ಸೋಲಿಸಿದ. ಹಿಣಲನ್ನು ಕಕುತ್ ಎಂದು ಕರೆಯುತ್ತಾರೆ. ಅದರ ಮೇಲೆ ಕುಳಿತ ಈತ ಕಾಕುತ್ಸ್ಥ ಎಂಬ ಹೆಸರನ್ನು ಪಡೆದ. ಇಂದ್ರನು ವಾಹನ ವಾಗಿದ್ದರಿಂದ ಈತನಿಗೆ ಇಂದ್ರವಾಹ. ಎಂಬ ಹೆಸರು ಕೂಡ ಬಂದಿತು. ಈ ಕಕುತ್ಸ್ಥನ ವಂಶದ್ ಎಲ್ಲರಿಗೂ ಕಾಕುಸ್ಥ ಎಂಬ ಹೆಸರು ಇವನಿಂದಲೇ ಬಂದಿದೆ. ಇದೇ ವಂಶದವನಾದ ಶ್ರೀರಾಮನನ್ನು ಕೂಡ ಕಾಕುತ್ಸ್ಥ ಎಂದು ಕರೆಯುತ್ತಾರೆ.

ಕಾಮೆಂಟ್‌ಗಳು