7 ತುಳಸಿಯ ಮಹಿಮೆ- ಆಸ್ತಿಕ ಗಂಧರ್ವನ ಕಥೆ. Tulasiya Mahime



ತುಳಸಿಯ ಮಹಿಮೆ


ಹಿಂದೆ ಆಸ್ತಿಕ ಎಂಬ ಗಂಧರ್ವ ನಂದನವನದಲ್ಲಿ ತನ್ನ ಪತ್ನಿಯೊಂದಿಗೆ ವಿಹರಿಸುತ್ತಾ ಅಲ್ಲಿಯೇ ತಪಸ್ಸು ಮಾಡುತ್ತಿದ್ದ ರೋಮಶ  ಎಂಬ ಮುನಿಯ ಮೇಲೆ ಮುತ್ತಿನ ಸರಗಳನ್ನು, ಮಲ್ಲಿಗೆ ಹೂವುಗಳನ್ನು ಎಸೆದ. ರೋಮಶ ಮುನಿ ಎಚ್ಚೆತ್ತು ಇದನ್ನರಿತು ಕೋಪದಿಂದ ನೀನು ಬ್ರಹ್ಮರಾಕ್ಷಸನಾಗಿ ಆಲದ ಮರದಲ್ಲಿ ವಾಸಮಾಡು ಎಂದು ಶಾಪವಿತ್ತರು. ಆಸ್ತೀಕನಿಗೆ ತನ್ನ ತಪ್ಪಿನ ಅರಿವಾಗಿ ರೋಮಶರನ್ನು ಪರಿಪರಿಯಾಗಿ ಬೇಡಿಕೊಂಡ ಇದರಿಂದ ಸಮಾಧಾನ ಹೊಂದಿದ ರೋಮಶ ಮುನಿ, ನೀನು ವಿಷ್ಣು ನಾಮವನ್ನು, ತುಳಸಿ ಮಹಿಮೆಯನ್ನು ಕೇಳಿದಾಗ ನಿನ್ನ ಶಾಪ ವಿಮೋಚನೆ ಯಾಗುವುದು ಎಂದರು. ಆಸ್ತಿಕ ಬ್ರಹ್ಮ ರಾಕ್ಷಸನಾಗಿ ಆಲದ ಮರದಲ್ಲಿ ವಾಸವಾಗಿದ್ದ. ಒಮ್ಮೆ ಕಾಶ್ಮೀರ ದೇಶದ ಸುಮೇಧ ಎಂಬ ಒಬ್ಬ ವಿಷ್ಣು ಭಕ್ತಾಗ್ರೇಸರ ತನ್ನ ಮಿತ್ರರೊಂದಿಗೆ ತೀರ್ಥಯಾತ್ರೆಗೆ ಹೊರಟ ಕಾಡಿನಲ್ಲಿ ಹೋಗುತ್ತಿರುವಾಗ ಅಲ್ಲಿದ್ದ ತುಳಸಿ ಗಿಡವನ್ನು ನೋಡಿ ಸುಮೇಧ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿದ ಇಷ್ಟು ಚಿಕ್ಕ ಗಿಡಕ್ಕೆ ನಮಸ್ಕಾರವೇಕೆ ಎಂದು ಮಿತ್ರ ಕೇಳಿದಾಗ ಸರ್ವ ಪಾಪಗಳನ್ನು ದೂರಮಾಡುವ ತುಳಸಿಯ ಮಹಿಮೆಯನ್ನು ಅಲ್ಲಿಯೇ ಆಲದ ಮರದ ಬುಡದಲ್ಲಿ ಕುಳಿತು ವಿಷ್ಣು ನಾಮಸ್ಮರಣೆಯನ್ನು ಮಾಡುತ್ತಾ ತಿಳಿಸಿದ. ಹೀಗೆ ವಿಷ್ಣು ನಾಮಸ್ಮರಣೆ ಮತ್ತು ತುಳಸಿ ಮಹಿಮೆಯನ್ನು ಆಲದ ಮರದಲ್ಲಿ ಬ್ರಹ್ಮರಾಕ್ಷಸ ರೂಪದಲ್ಲಿ ವಾಸವಾಗಿದ್ದ ಆಸ್ತಿಕ ಕೇಳಿಸಿಕೊಂಡು ಶಾಪ ವಿಮೋಚನೆಯನ್ನು ಹೊಂದಿದ. ವಿಷ್ಣು ಭಕ್ತನಿಗೆ ನಮಿಸಿ ತನ್ನ ಪೂರ್ವ ಚರಿತ್ರೆಯನ್ನು ಹೇಳಿ ತನ್ನ ಲೋಕಕ್ಕೆ ತೆರಳಿದ. ಹೀಗೆ ತುಳಸಿ ಮಹಿಮೆ ಅಪಾರವಾದದ್ದು.


ಕಾಮೆಂಟ್‌ಗಳು