39 ಗಜೇಂದ್ರ ಮೋಕ್ಷ, ಇಂದ್ರದ್ಯುಮ್ನ ಮಹಾರಾಜನ ಕಥೆ. Gajendra Moksha, Indradyum...


ಇಂದ್ರದ್ಯುಮ್ನ ಮಹಾರಾಜ
ಹಿಂದೆ ಪಾಂಡ್ಯ ಎಂಬ ಪ್ರದೇಶದಲ್ಲಿ ಇಂದ್ರದ್ಯುಮ್ನ ಎಂಬ ರಾಜ ರಾಜ್ಯಭಾರವನ್ನು ಮಾಡುತ್ತಿದ್ದ. ಈತ ಮಹಾವಿಷ್ಣುವಿನ ಭಕ್ತನಾಗಿದ್ದ. ನಿರಂತರ ಮಹಾವಿಷ್ಣುವಿನ ಸ್ಮರಣೆಯಲ್ಲಿ ತೊಡಗಿರುತ್ತಿದ್ದ. ಒಮ್ಮೆ ಇಂದ್ರದ್ಯುಮ್ನ ಮಹಾರಾಜ ವಿಶೇಷವಾದ ವಿಷ್ಣು ಪೂಜೆಯನ್ನು ಕೈಗೊಂಡ. ಆ ಸಂದರ್ಭದಲ್ಲಿ ಆತನಲ್ಲಿಗೆ ಅಗಸ್ತ್ಯ ಮಹರ್ಷಿಗಳು ಆಗಮಿಸಿದರು. ವಿಷ್ಣುಪೂಜೆಯಲ್ಲಿ ವ್ಯಸ್ತನಾದ ಕಾರಣ ಮಹಾರಾಜ ಅಗಸ್ತ್ಯ ಮಹರ್ಷಿಗಳನ್ನು ಯಥೋಚಿತವಾಗಿ ಗೌರವಿಸಲು ಸಾಧ್ಯವಾಗಲಿಲ್ಲ. ಇದರಿಂದ ಅಗಸ್ತ್ಯರಿಗೆ ಅವಮಾನವಾಯಿತು. ತನಗೆ ಅಗೌರವವನ್ನು ಮಾಡಿದ ರಾಜನನ್ನು ಅಗಸ್ತ್ಯರು ನೀನು ಗಜ ಜನ್ಮವನ್ನು ಪಡೆ ಎಂದು ಶಾಪವನ್ನು ನೀಡಿದರು. ಹೀಗೆ ಅಗಸ್ತ್ಯರ ಶಾಪದಿಂದ ಆನೆಯ ಜನ್ಮವನ್ನು ಪಡೆದ ಇಂದ್ರದ್ಯುಮ್ನ ಮಹಾರಾಜ ದೀರ್ಘಕಾಲ ಗಜರಾಜನಾಗಿದ್ದ. ಒಮ್ಮೆ ಈತ ನೀರು ಕುಡಿಯುತ್ತಿದ್ದಾಗ ಒಂದು ಮೊಸಳೆ ಈತನನ್ನು ಹಿಡಿಯಿತು. ಆಗ ತಪ್ಪಿಸಿಕೊಳ್ಳಲು ಅಶಕ್ತನಾಗಿ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದ ಈತ ಹಿಂದಿನ ಜನ್ಮದಲ್ಲಿ ವಿಷ್ಣು ಭಕ್ತನಾಗಿದ್ದ ಸಂಸ್ಕಾರದಿಂದ ಆರ್ತನಾಗಿ ವಿಷ್ಣುವನ್ನು ಕರೆದ. ಆಗ ವಿಷ್ಣು ಪ್ರತ್ಯಕ್ಷನಾಗಿ ಮೊಸಳೆಯನ್ನು ತನ್ನ ಚಕ್ರಾಯುಧದಿಂದ ಸಂಹರಿಸಿದ. ಹಾಗೆಯೇ ಮಹಾವಿಷ್ಣುವಿನ ದರ್ಶನದಿಂದ ಇಂದ್ರದ್ಯುಮ್ನ ಶಾಪ ವಿಮೋಚನೆಯಾಗಿ ಪೂರ್ವಪುಣ್ಯದ ಫಲದಿಂದ ವಿಷ್ಣು ಸಾಯುಜ್ಯವನ್ನು ಪಡೆದ.

ಕಾಮೆಂಟ್‌ಗಳು